ದಂದಣ ದತ್ತಣ ಗೋಷ್ಠಿ

ಮಕ್ಕಳೇ, ಮಕ್ಕಳಿಗಾಗಿ ನಡೆಸಿಕೊಡುವ ಒಂದು ಪೂರ್ಣ ಪ್ರಮಾಣದ ಕಾರ್ಯಕ್ರಮ ‘ದಂದಣ – ದತ್ತಣ’ ಗೋಷ್ಠಿ. ಬಹುಶಃ ದೇಶದಲ್ಲೇ ಸ್ವಾತಂತ್ರ್ಯ ಪೂರ್ವದಲ್ಲೇ ಕೇವಲ ಮಕ್ಕಳಿಗಾಗಿಯೇ ನಿರ್ಮಾಣಗೊಂಡ ಮೊದಲ ವೇದಿಕೆ ಎಂದರೆ ತಪ್ಪಾಗಲಾರದು. ಇದನ್ನು ಹುಟ್ಟುಹಾಕಿದವರು ಶ್ರೀ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು. ಸಿರಿಗೆರೆಯಲ್ಲಿ ಅಂದು ಅವರು ನೆಟ್ಟ ಸಸಿಯನ್ನು ಇಂದೂ ಸಹ ಸಲಹುತ್ತಿರುವವರು ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು. ಇಂದು ಆ ಸಸಿ ಹೆಮ್ಮರವಾಗಿ ಬೆಳೆದು ಸಿರಿಗೆರೆಯಿಂದ ಸಾಣೇಹಳ್ಳಿಯವರೆಗೂ ಬಿಳಿಲು ಬಿಟ್ಟುಕೊಂಡಿದೆ.

ಸಿರಿಗೆರೆಯಲ್ಲಿ ನೆಟ್ಟ ಆ ಸಸಿ ಸಾಣೇಹಳ್ಳಿಯಲ್ಲೂ ಬಿಳಿಲು ಬಿಡುವಂತೆ ಹಾರೈಕೆ ಮಾಡಿದವರು ಹಿರಿಯ ಗುರುಗಳ ಕರಕಮಲ ಸಂಜಾತರಾದ ಪೂಜ್ಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು. ಸಾಣೇಹಳ್ಳಿಯಲ್ಲಿ ಕಳೆದ 19 ವರ್ಷಗಳಿಂದಲೂ ಪ್ರತಿ ಹದಿನೈದು ದಿನಗಳಿಗೊಮ್ಮೆ ನಿರಂತರವಾಗಿ ಗೋಷ್ಠಿಗಳು ನಡೆದುಕೊಂಡು ಬರುತ್ತಿವೆ. ಇದುವರೆಗೆ ವರ್ಷಕ್ಕೆ ಕನಿಷ್ಠ 8 ಗೋಷ್ಠಿಯಂತೆ ಸುಮಾರು 1550ಕ್ಕೂ ಹೆಚ್ಚು ಗೋಷ್ಠಿಗಳು ನಡೆದಿವೆ. ಅಂದರೆ ಅಷ್ಟೇ ಸಂಖ್ಯೆಯ ಅತಿಥಿಗಳು, ವೈವಿಧ್ಯಮಯ ವಿಷಯಗಳು ಇಲ್ಲಿ ಬಂದುಹೋಗಿವೆ. ಒಂದು ಗೋಷ್ಠಿಯು ವಚನಗೀತೆ, ಸ್ವಾಗತ, ನಿರೂಪಣೆ, ವಿಷಯ ಮಂಡನೆ, ಅತಿಥಿ ಪರಿಚಯ, ನೃತ್ಯರೂಪಕ, ಹಾಡು ವಂದನಾರ್ಪಣೆ ಮುಂತಾದವುಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ಸಂಖ್ಯೆ 15 ರಿಂದ 20. ಈಗೀಗ ಅದು 50-60ಕ್ಕೂ ಏರಿದೆ. ಸರಾಸರಿ 15 ವಿದ್ಯಾರ್ಥಿಗಳು ಅಂದ್ರೂ ಸುಮಾರು 23,250 ವಿದ್ಯಾರ್ಥಿಗಳು ವೇದಿಕೆಯನ್ನು ಬಳಸಿಕೊಳ್ಳುವ ಮೂಲಕ ಈ ಗೋಷ್ಠಿಯ ನೇರ ಉಪಯೋಗ ಪಡೆದಿದ್ದರೆ, ಕುಳಿತು ನೋಡಿ ಆಸ್ವಾದಿಸಿದವರ ಸಂಖ್ಯೆ ಲಕ್ಷ ದಾಟುತ್ತದೆ. ಇವೆಲ್ಲವನ್ನೂ ದಾಖಲಿಸಿದ್ದರೆ ನಿಜಕ್ಕೂ ಒಂದು ಕಿರು ವಿಶ್ವಕೋಶವೇ ಆಗುತ್ತಿತ್ತು.


ಈ ಹದಿನೈದು ವರ್ಷಗಳಲ್ಲಿ ದಂದಣ ದತ್ತಣ ಗೋಷ್ಠಿಯ ಸ್ವರೂಪ ಸಾಕಷ್ಟು ಬದಲಾಗಿದೆ. ಮೊದಮೊದಲು ಮಕ್ಕಳು ವೇದಿಕೆಯ ಮೇಲೆ ಬಂದು ನಿಂತು ನಾಲ್ಕಾರು ನಿಮಿಷ ತೊದಲು ನುಡಿಯುವುದೇ ಒಂದು ಸಾಧನೆಯಾಗಿತ್ತು. ಬರಬರುತ್ತಾ ಮಕ್ಕಳು ಅರಳು ಹುರಿದಂತೆ 10–15 ನಿಮಿಷಗಳ ಕಾಲ ನಿರಂತರವಾಗಿ, ನಿರರ್ಗಳವಾಗಿ ಮಾತನಾಡತೊಡಗಿದರು. ನಂತರ ಮಾತಿನ ಜೊತೆಗೆ ಆ ವಿಷಯಕ್ಕೆ ಪೂರಕವಾದ ರೂಪಕಗಳನ್ನ ಅಭಿನಯಿಸತೊಡಗಿದರು. ನಂತರ ಕನ್ನಡದಲ್ಲಷ್ಟೇ ಅಲ್ಲ ಹಿಂದಿ, ಇಂಗ್ಲಿಷಿನಲ್ಲೂ ಮಾತನಾಡುವ ರೂಢಿ ಬಂದಿದೆ. ಅಲ್ಲದೇ ಇಡೀ ವಿಷಯನ್ನು ರಂಗತಂತ್ರಗಳನ್ನ ಬಳಸಿಕೊಂಡು ರೂಪಕದಂತೆ, ನಾಟಕದಂತೆ ಪ್ರೇಕ್ಷಕರ ಮುಂದಿಡುವ ಪ್ರಯತ್ನವನ್ನೂ ಮಾಡಿದ್ದಾರೆ. ಗೋಷ್ಠಿಯಲ್ಲಿ ಮಕ್ಕಳೇನು ಮಾತನಾಡಬಲ್ಲರು ಎಂದುಕೊಂಡು ಬಂದ ಅತಿಥಿಗಳು ಈ ಮಕ್ಕಳ ಮಾತುಗಾರಿಕೆ, ವಿಷಯ ಸಂಗ್ರಹ, ಅಭಿವ್ಯಕ್ತಿಯ ವೈಖರಿ, ಆಧುನಿಕ ಉಪಕರಣಗಳ ಬಳಕೆ ಕಂಡು ನಿಜಕ್ಕೂ ಮೂಕವಿಸ್ಮಿತರಾಗಿದ್ದಾರೆ. ಮೊದಮೊದಲು ಮಕ್ಕಳು, ಮಕ್ಕಳ ಪೋಷಕರಷ್ಟೇ ಭಾಗವಹಿಸುತ್ತಿದ್ದ ಈ ಗೋಷ್ಠಿಯ ಕಾರ್ಯಕ್ರಮದಲ್ಲಿ ಈಗೀಗ ಅಕ್ಕಪಕ್ಕದ ಗ್ರಾಮಸ್ಥರು, ವಿಷಯಾಸಕ್ತರೂ ಸ್ವಯಂಪ್ರೇರಿತರಾಗಿ ಭಾಗವಹಿಸುತ್ತಿದ್ದಾರೆ. ಅಲ್ಲದೆ ಕಾರ್ಯಕ್ರಮದ ಒಂದು ಭಾಗವಾದ ‘ಪ್ರಶ್ನೋತ್ತರ’ ಹಲವರ ಜ್ಞಾನದಾಹವನ್ನು ತಣಿಸುತ್ತಲಿದೆ.



2008-2009 Dandana Dattana Gosti Photos (Habbagalu)




2009-2010 Dandana Dattana Gosti Photos (Drushya Madhyama)









2009-2010 Dandana Dattana Gosti Photos (Gramina Sogadu)













2010-2011 Dandana Dattana Gosti Photos (Taralabalu Guruparampare)


























2010-2011 Dandana Dattana Gosti Photos (Bharathada Bhavishya)
















2011-2012 Dandana Dattana Gosti Photos (Bhandvya)





















No comments:

Post a Comment

School Smarana Sanchike 2017-2018